ಸೋಮವಾರ, ಏಪ್ರಿಲ್ 6, 2009

ಇದು ಏತರ ಸಮಾಧಾನವೋ...

ಕವನ- ಇದು ಏತರ ಸಮಾಧಾನವೋ...

ಬೀಳುತ್ತಿರುವ ಕಲ್ಲುಗಳ ದಿಕ್ಕು
ನಮ್ಮ ಮಿನಾರುಗಳಿಂದ
ನಿಮ್ಮ ಚರ್ಚುಗಳೆಡೆಗೆ ತಿರುಗಿದ್ದಕ್ಕೆ

ಆ ಚೂರಿ-ಭರ್ಚಿ, ಬೆಂಕಿಯ ಕೆನ್ನಾಲಗೆ
ನಮ್ಮ ಗರ್ಭಿಣಿಯರಿಂದ
ನಿಮ್ಮ ನನ್ನುಗಳೆಡೆಗೆ ಪಸರಿಸಿದ್ದಕ್ಕೆ

ಇದು ಏತರ ಸಮಾಧಾನವೋ
ಕೆಂಡ ಕಲಿಸಿದಂತೆ
ಹಿಡಿಯಷ್ಟಿರುವ ಹೊಟ್ಟೆಯೊಳಗೆ...

ಶನಿವಾರ, ಏಪ್ರಿಲ್ 4, 2009

ಹಾಯ್ ಬ್ಲಾಗಿಗರೇ

ಕನ್ನಡದ ಎಲ್ಲಾ ಬ್ಲಾಗ್ ಬಂಧುಗಳಿಗೆ ನನ್ನ ಸಲಾಂಗಳು
ನಿಮ್ಮೊಂದಿಗೆ ನನ್ನನಿಸಿಕೆ ಹಂಚಿಕೊಳ್ಳಲಿಕ್ಕೆ ತುಂಬಾ ಸಂತೋಷ ಆಗುತ್ತಿದೆ.